ಒಂದೇ  ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ.!

(ನ್ಯೂಸ್ ಕಡಬ)newskadaba.com ತುಮಕೂರು,ಮೇ.22ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ  ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಮಂಜುಳಾ (13), ಮಧು ಕುಮಾರ್ (13), ಮಹಾಲಕ್ಷ್ಮಿ (15) ಹಾಗೂ ಭಾನು (14) ಎಂಬ ಹೆಸರಿನ ಮಕ್ಕಳು ಕಣ್ಮರೆಯಾಗಿದ್ದಾರೆ.

ಚಿಕ್ಕಬಾಣಗೆರೆ ಗ್ರಾಮದ ಮಲ್ಲಿಕಾರ್ಜುನ ಅವರ ಮಕ್ಕಳಾದ ಮಂಜುಳಾ ಹಾಗೂ ಮಧುಕುಮಾರ್, ಹಾಗೂ ಅದೇ ಗ್ರಾಮದ ಕೃಷ್ಣಪ್ಪನ ಮಕ್ಕಳಾದ ಮಹಾಲಕ್ಷ್ಮಿ ಹಾಗೂ ಭಾನು ಮನೆಯಿಂದ ಹೋದವರು ಕಣ್ಮರೆಯಾಗಿದ್ದಾರೆ.ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು ತಮ್ಮ ಮಕ್ಕಳನ್ನ ಹುಡುಕಿಕೊಂಡುವಂತೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Also Read  ಕುಂತೂರು: ಗಾಂಜಾ ಸೇವಿಸಿದ್ದ ಯುವಕನ ಬಂಧನ

 

error: Content is protected !!
Scroll to Top