ಕೆ.ಆರ್.ಸರ್ಕಲ್‌ನ ಅಂಡರ್ ಪಾಸ್‌ ನೀರಿನಲ್ಲಿ ಸಿಲುಕಿ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.22. ಭಾರಿ ಮಳೆ ಸುರಿದಿದ್ದರಿಂದ ಕೆ.ಆರ್.ಸರ್ಕಲ್ ನ ಅಂಡರ್ ಪಾಸ್ ನಲ್ಲಿ ನೀರಿನಲ್ಲಿ ಸಿಲುಕಿ ಕಾರಿನಲ್ಲಿದ್ದ ಯುವತಿಯೊಬ್ಬಳು ದಾರುಣವಾಗಿ ಸಾವ್ನಪ್ಪಿದ್ದಾಳೆ.

ಆಂಧ್ರದ ವಿಜಯವಾಡದ ಮೂಲದ ಭಾನುರೇಖಾ(22)  ಮೃತಪಟ್ಟವರು. ಇವರು ಇನ್ಫೋಸಿಸ್ ಉದ್ಯೋಗಿಯಾಗಿದ್ದರು. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದು, ಅಂಡರ್ ಪಾಸ್ ನಲ್ಲಿ ಏಕಾಏಕಿ  ಭಾರಿ ಮಳೆಯ ಪ್ರಮಾಣದಲ್ಲಿ  ನೀರು ಸಂಗ್ರಹವಾಗಿತ್ತು. ಈ ವೇಳೆಯಲ್ಲಿ ಕಾರು ಮುಳುಗಡೆಯಾಗಿದ್ದು ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರು ಮುಳುಗಡೆಯಾಗಿದ್ದ ವೇಳೆಯಲ್ಲಿ  ಭಾನುರೇಖಾ ಹೆಚ್ಚಿನ ಪ್ರಮಾಣದಲ್ಲಿ ನೀರುಕುಡಿದರಿಂದ ಅಸ್ವಸ್ಥಗೊಂಡ ಆಕೆಯನ್ನು ಸ್ಥಳೀಯರು ಖಾಸಗಿ ಆಸತ್ರೆಗೆ ಕರೆದೊಯ್ದಿದ್ದಾರೆ. ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Also Read  ಶಾಸಕ ಮುನಿರತ್ನ ಪ್ರಕರಣ: ತನಿಖೆಗೆ ಎಸ್‌ಐಟಿ ರಚಿಸುವಂತೆ ಒಕ್ಕಲಿಗ ನಾಯಕರ ಮನವಿ

 

error: Content is protected !!
Scroll to Top