ಪುತ್ತೂರು: ಕಾರುಗಳ ನಡುವೆ ಅಪಘಾತ   ➤ ಆರು ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.22. ಕಾಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾಗಿ ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಬೆಳ್ತಂಗಡಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಎದುರುಗಡೆಯಿಂದ ಬರುತ್ತಿದ್ದ ಮಾರುತಿ 800 ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಇನ್ನು ಸ್ವಿಫ್ಟ್ ಕಾರಿನ ಚಾಲಕ ಮಹಾಬಲ ಶೆಟ್ಟಿ ಹಾಗೂ ಕಾರಿನಲ್ಲಿದ್ದ ಅನ್ವಿತಾ, ಮಾನ್ವಿತಾ, ಮಮತಾ, ಆಶಾ, ಮಾರುತಿ ಕಾರಿನಲ್ಲಿದ್ದ ಅಣ್ಣಿಗೌಡ ಎಂಬುವವರಿಗೆ ಗಾಯಗಳಾಗಿವೆ. ಇವರೆಲ್ಲರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಉಡುಪಿ: ಬಾರ್ಕೂರಿನ ರಿಶಾ ತಾನ್ಯಾ ಪಿಂಟೋರವರಿಗೆ "ಮಿಸ್ ಟೀನ್ ಕರಾವಳಿ 2024" ಕಿರೀಟ

 

error: Content is protected !!
Scroll to Top