ಹುಟ್ಟುಹಬ್ಬದ ದಿನದಂದೇ ಹೃದಯಘಾತದಿಂದ ಬಾಲಕ ಮೃತ್ಯು.!

(ನ್ಯೂಸ್ ಕಡಬ)newskadaba.com ತೆಲಂಗಾಣ,ಮೇ.22 ಹುಟ್ಟುಹಬ್ಬದ ದಿನದಂದೇ ಹದಿನಾರು ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಮೃತಪಟ್ಟಿದ್ದು, ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮಿಸಬೇಕಿದ್ದ ಕುಟುಂಬ ಸದಸ್ಯರು ಶೋಕದ ಮಡುವಿನಲ್ಲಿ ಮೃತದೇಹದ ಪಕ್ಕ ಕೇಕ್ ಕತ್ತರಿಸಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆಸೀಫಾಬಾದ್ ಜಿಲ್ಲೆಯ ಬಾಬಾಪುರದ ಸಚಿನ್ ಎಂಬ ಬಾಲಕ ಶುಕ್ರವಾರದಂದು ಹದಿನಾರನೇ ವಸಂತಕ್ಕೆ ಕಾಲಿಟ್ಟಿದ್ದು, ಇದರ ಅದ್ದೂರಿ ಆಚರಣೆಗಾಗಿ ಕುಟುಂಬ ಸದಸ್ಯರು ದೊಡ್ಡ ಕೇಕ್ ತಂದು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.ಇದರ ಮಧ್ಯೆ ಮನೆಯಿಂದ ಹೊರ ಹೋಗಿದ್ದ ಸಚಿನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

Also Read  ಡಾಂಬರು ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಪ್ರಾಣಾಪಾಯದಿಂದ ಪಾರು

 

 

error: Content is protected !!
Scroll to Top