ಕುಡಿದ ಮತ್ತಿನಲ್ಲಿ ರಿಕ್ಷಾ ಚಾಲಕರ ಅಸಭ್ಯ ವರ್ತನೆ.!

(ನ್ಯೂಸ್ ಕಡಬ)newskadaba.com ಧ್ಯಪ್ರದೇಶ,ಮೇ.20ಕುಡಿದ ಮತ್ತಿನಲ್ಲಿ ರಿಕ್ಷಾ ಚಾಲಕರು ರಸ್ತೆಯ ಮಧ್ಯೆ ಹಾಡನ್ನು ಹಾಡುತ್ತ ಕುಣಿಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಘಟನೆ ಮಧ್ಯಪ್ರದೇಶದ ಜಬಲ್‌ ಪುರ್‌ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ರಾಜು ಎಂಬ ಹೆಸರಿನ ರಿಕ್ಷಾ ಚಾಲಕ ಮೊದಲಿಗೆ ಕುಡಿದ ಮತ್ತಿನಲ್ಲಿ ಬಾಲಿವುಡ್‌ ಹಾಡನ್ನು ಹಾಕಿ ಕುಣಿಯಲು ಆರಂಭಿಸಿದ್ದು, ನಂತರ ಉಳಿದ ರಿಕ್ಷಾ ಚಾಲಕರು ಆತನಿಗೆ ಸಾಥ್‌ ನೀಡಿದ್ದರು.ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಲಾಠಿ ಏಟಿನ ರುಚಿ ತೋರಿಸಿ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ರಿಕ್ಷಾ ಚಾಲಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

Also Read  ಏರುತ್ತಲೇ ಇರುವ ಗೋಧಿ ಹಿಟ್ಟಿನ ದರ ನಿಯಂತ್ರಣಕ್ಕೆ ಕ್ರಮ ​! ➤  ಕೇಂದ್ರ ಸರ್ಕಾರ ಭರವಸೆ

 

 

error: Content is protected !!
Scroll to Top