ಮುಂಬೈ ದಾಳಿ ಆರೋಪಿ ತಹಾವ್ವುರ್ ರಾಣಾ ಹಸ್ತಾಂತರಕ್ಕೆ ಅಮೇರಿಕಾ ಒಪ್ಪಿಗೆ !

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಮೇ.20. 2008 ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ, ಪಾಕ್ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸ್ಥಳೀಯ ನ್ಯಾಯಾಲಯ ಅನುಮೋದನೆ ನೀಡಿದೆ.


ಮುಂಬೈ ದಾಳಿಗೆ ಸಂಬಂಧಿಸಿದಂತೆ ಈತನನ್ನು ಒಪ್ಪಿಸಬೇಕು ಎಂಬ ಭಾರತದ ಕೋರಿಕೆಯ ಮೇರೆಗೆ ಕಳೆದ ಜೂ. 10 ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು. ಆತನ ಹಸ್ತಾಂತರಕ್ಕಾಗಿ ಅಮೆರಿಕ ಸರ್ಕಾರಕ್ಕೆ ಭಾರತ ಮನವಿ ಮಾಡಿದ್ದು, ಇದೀಗ ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡಿದೆ.

Also Read  ಖಾಸಗಿ ಬಸ್ ನಿರ್ವಾಹಕರ ನಡುವೆ ಜಗಳ  ಇಬ್ಬರು ಅರೆಸ್ಟ್     

error: Content is protected !!