ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಕಟ್ಟದೆ ₹2.65 ಕೋಟಿ ದುರ್ಬಳಕೆ.!

(ನ್ಯೂಸ್ ಕಡಬ)newskadaba.comಲಬುರಗಿ,ಮೇ.20 ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ (ಪಿಎಂವೈ-ಯು) ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳದೇ ₹ 2.65 ಕೋಟಿ ಅನುದಾನ ದುರ್ಬಳಕೆಯಾದ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಸತಿ ಇಲಾಖೆ ಅಧಿಕಾರಿಗಳ ತಂಡ ತನಿಖೆ ನಡೆಸಲು ಅಫಜಲಪುರಕ್ಕೆ ಭೇಟಿ ನೀಡಿದೆ.

‘2019-20 ಅವಧಿಯಲ್ಲಿ ಅಫಜಲಪುರದ 266 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 200 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಒಂದೂವರೆ ವರ್ಷದ ಅವಧಿಯಲ್ಲಿ ₹2.65 ಕೋಟಿ ಅನುದಾನ ಪಾವತಿ ಆಗಿತ್ತು. ಭುವನ್ ಆಯಪ್‌ನಲ್ಲಿ ನಮೂದಿಸಿದ್ದ ವಸತಿ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದಾಗ, ಅಲ್ಲಿ ಮನೆಗಳು ನಿರ್ಮಾಣ ಆಗದಿರುವುದು ಕಂಡು ಬಂತು’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.

Also Read  ಬಿಸಿಎ ವಿದ್ಯಾರ್ಥಿಯೋರ್ವ ಐದನೇ ಮಹಡಿಯಿಂದ ಬಿದ್ದು ಮೃತ್ಯು

 

error: Content is protected !!
Scroll to Top