‘ತಾಜ್ ಮಹಲ್’ ಬಳಿ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ದಂಪತಿ

(ನ್ಯೂಸ್ ಕಡಬ)newskadaba.com ವಿಜಯಪುರ,ಮೇ.20 ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 74 ವರ್ಷದ ಮರೆಪ್ಪ ಹಾಗೂ 67 ವರ್ಷದ ಅವರ ಪತ್ನಿ ಶಾಂತಾ ತಳವಾರ ತಮ್ಮ ಐವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಆಗ್ರಾದ ತಾಜ್ ಮಹಲ್ ಬಳಿ ಆಚರಿಸಿಕೊಂಡಿದ್ದಾರೆ.

ಪ್ರೇಮಸೌಧ ತಾಜ್ ಮಹಲ್ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಈ ದಂಪತಿ ಬಯಸಿದ್ದು, ಮಕ್ಕಳಾದ ಪರಶುರಾಮ, ಬಸವರಾಜ ಆಗ್ರಾಕ್ಕೆ ಕರೆದೊಯ್ಯುವ ಮೂಲಕ ಇದನ್ನು ನೆರವೇರಿಸಿದ್ದಾರೆ.ಅಲ್ಲದೆ ಆಗ್ರಾದ ಪಂಚತಾರಾ ಹೋಟೆಲ್ ನಲ್ಲಿ ಕೇಕ್ ಕತ್ತರಿಸಿ ದಂಪತಿ ಸಂಭ್ರಮಿಸಿದ್ದಾರೆ.

Also Read  ಸ್ಯಾಂಟ್ರೋ ರವಿಗೆ ಜ.25 ರವರೆಗೆ ನ್ಯಾಯಾಂಗ ಬಂಧನ ➤ ಕೋರ್ಟ್ ಆದೇಶ..!

 

 

 

error: Content is protected !!
Scroll to Top