ಸಚಿವ ಸ್ಥಾನ ಸಿಗದ ಕಾರಣಕ್ಕೆ ಫುಲ್ ಗರಂ ಆದ ಕಾಂಗ್ರೆಸ್ ನಾಯಕ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.20 ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ 10 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಚಿವ ಸ್ಥಾನ ನೀಡದಿರುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಗರಂ ಆಗಿದ್ದಾರೆ.

ಮೊದಲ ಲಿಸ್ಟ್ ನಲ್ಲಿ ಮಂತ್ರಿಗಿರಿ ಸಿಗದಿರುವುದಕ್ಕೆ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು 224 ಶಾಸಕರಲ್ಲೇ ಅತ್ಯಂತ ಹಿರಿಯ ಶಾಸಕನಾಗಿದ್ದೇನೆ. ಅತಿ ಹೆಚ್ಚು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನನ್ನೇ ಹೊರಗಿಟ್ಟು ಪ್ರಮಾಣವಚನ ಮಾಡ್ತಾ ಇದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.ಇದು ಸರಿಯಲ್ಲ ಎಂದು ಗುಡುಗಿದ ಅವರು ಏರು ಧ್ವನಿಯಲ್ಲಿ ಆಕ್ಷೇಪ ಹೊರ ಹಾಕಿದ್ದಾರೆ.

Also Read  ಕಾಲೇಜು ಆರಂಭವಾದ ಬೆನ್ನಲ್ಲೇ ಒಟ್ಟು 70 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು..!

 

 

error: Content is protected !!
Scroll to Top