(ನ್ಯೂಸ್ ಕಡಬ)newskadaba.com ದೆಹಲಿ,ಮೇ.20 ದೆಹಲಿಯಲ್ಲಿ ಇದುವರೆಗಿನ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಮಾದಕವಸ್ತು ವಿಭಾಗದ ಅಧಿಕಾರಿಗಳು ಎಂದು ಹೇಳಿಕೊಂಡ ವಂಚಕರು ವೈದ್ಯೆಯೊಬ್ಬರ ಉಳಿತಾಯದಿಂದ 4.47 ಕೋಟಿ ರೂಪಾಯಿ ಲಪಟಾಯಿಸಿದ್ದಾರೆ.
ವೈದ್ಯೆಗೆ ಬಂದಿದ್ದ ಫೆಡ್‌ಎಕ್ಸ್ ಕೊರಿಯರ್ ಪ್ಯಾಕ್‌ನಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತು “ಎಂಡಿಎಂಎ” ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು 34 ವರ್ಷದ ವೈದ್ಯೆಗೆ ಮಾಹಿತಿ ನೀಡಿ ಹಣ ವಸೂಲಿ ಮಾಡಲಾಗಿದೆ. ಮಾದಕ ವಸ್ತುಗಳ ಮಾರಾಟದಿಂದ ಬಂದ ಹಣವನ್ನು ನೀವು ಸ್ವೀಕರಿಸಿದ್ದೀರಿ ಎಂದು ಆಪಾದಿಸಿದ ವಂಚಕರು ವೈದ್ಯೆಯ ಖಾತೆಯ ಹಣವನ್ನು ತಾತ್ಕಾಲಿಕವಾಗಿ ಹಸ್ತಾಂತರಿಸುವಂತೆ ಬಲವಂತಪಡಿಸಿದರು ಎಂದು ತಿಳಿದು ಬಂದಿದೆ.