ಜಾತಿನಿಂದನೆ ಆರೋಪದಡಿ ಬಿಜೆಪಿ ಶಾಸಕನ ವಿರುದ್ಧ FIR​ ದಾಖಲು..!

(ನ್ಯೂಸ್ ಕಡಬ)newskadaba.com ದಾವಣಗೆರೆ,ಮೇ.19 ಜಾತಿನಿಂದನೆ ಆರೋಪದಡಿ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಹರಿಹರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ.‘ಅಪ್ಪನಿಗೆ ಹುಟ್ಟಿದ ಮಾದರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ’ ಎಂದು ಚುನಾವಣೆಯಲ್ಲಿ ಗೆದ್ದ ಎರಡೇ ದಿನದಲ್ಲಿ ಹರೀಶ್ ವಿವಾದಿತ ಹೇಳಿಕೆ ನೀಡಿದ್ದರು.

ದಲಿತ ಮುಖಂಡರ ದೂರು ಹಿನ್ನೆಲೆ ಎಫ್​ಐಆರ್ ದಾಖಲಾಗಿದ್ದು, ಬಿ.ಪಿ.ಹರೀಶ್​​ ಬಂಧನ ಭೀತಿಯಲ್ಲಿದ್ದಾರೆ. ಮಾದಿಗ ಸಮುದಾಯಕ್ಕೆ ಬಿಜೆಪಿ ಸರ್ಕಾರ ಒಳಮೀಸಲಾತಿ ನೀಡಿದೆ. ಆದರೆ ಮಾದಿಗರು ಬಿಜೆಪಿಗೆ ಮತ ಹಾಕಿಲ್ಲವೆಂದು ಹರೀಶ್ ವಾಗ್ದಾಳಿ ಮಾಡಿದ್ದರು.ಬಿ.ಪಿ.ಹರೀಶ್ ನೀಡಿದ್ದ ಅವಹೇಳನಕಾರಿ ಹೇಳಿಕೆ ವೈರಲ್ ಆಗಿತ್ತು. 7 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಬಿ.ಪಿ.ಹರೀಶ್, 2 ಬಾರಿ ಗೆದಿದ್ದಾರೆ.

Also Read  ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದಿನಿಂದ “ಭಾರತೀಯ ಭಾಷಾ ಉತ್ಸವ”

 

error: Content is protected !!
Scroll to Top