ಹೆಲ್ಮೆಟ್​ ಧರಿಸದೆ ಮಹಿಳಾ ಪಿಎಸ್​ಐ ಸಂಚಾರ..! ➤ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.19 ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನಗಳನ್ನು ತಡೆದು ಕೇಸ್ ದಾಖಲಿಸಿ ದಂಡ ವಿಧಿಸುತ್ತಾರೆ. ಆದರೆ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದರೆ. ಮಹಿಳಾ ಸಬ್​ ಇನ್​ಸ್ಟೆಕ್ಟರ್ ಒಬ್ಬರು ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದು ಹೆಲ್ಮೆಟ್ ಧರಿಸದೇ ಹೋಗುತ್ತಿದ್ದಾರೆ.

ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅವರ ಫೋಟೋ ಹಾಗೂ ವಿಡಿಯೋ ಸಮೇತ ಟ್ವೀಟ್ ಮಾಡಿದ್ದರು. ಡಿಜಿಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್ ಹಾಗೂ ಕಬ್ಬನ್​ಪಾರ್ಕ್ ಸಂಚಾರ ಪೊಲೀಸರನ್ನು ಮೆನ್ಷನ್ ಮಾಡಿದ್ದ ಈ ಟ್ವೀಟನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಎಚ್ಚೆತ್ತುಕೊಂಡ ಕಬ್ಬನ್​ಪಾರ್ಕ್ ಸಂಚಾರ ಪೊಲೀಸರು ಸಂಬಂಧಿತ ಪಿಎಸ್​ಐ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.

Also Read  ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

 

error: Content is protected !!
Scroll to Top