ಪತ್ನಿಯ ಕತ್ತು ಹಿಸುಕಿ ಕೊಂದ ಪತಿ..!➤ಆರೋಪಿ ಆರೆಸ್ಟ್

(ನ್ಯೂಸ್ ಕಡಬ)newskadaba.com ಯಾದಗಿರಿ,ಮೇ.19 ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿದ್ದ ಕುಟುಂಬ.ಮಕ್ಕಳ ಮದುವೆ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.ದೋರನಹಳ್ಳಿ ಗ್ರಾಮದ ಲಕ್ಷ್ಮೀ (32) ಕೊಲೆಯಾದ ಮಹಿಳೆ. ಲಕ್ಷ್ಮೀ ಮತ್ತು ನಿಂಗಪ್ಪ ದಂಪತಿ ನಡುವೆ ಎರಡು ವರ್ಷದಿಂದ ಕೌಟುಂಬಿಕ ಕಲಹವಿದ್ದ ಹಿನ್ನೆಲೆಯಲ್ಲಿ ದಂಪತಿ ಬೇರೆ ಬೇರೆ ವಾಸವಾಗಿದ್ದರು.

ಮಕ್ಕಳನ್ನು ಪತ್ನಿ ಮದುವೆ ಮಾಡಲು ಮುಂದಾಗಿದ್ದಾಳೆಂದು ತಿಳಿದ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ. ಸ್ಥಳಕ್ಕೆ ಶಹಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತ ಲಕ್ಷ್ಮೀ ಸಹೋದರ ಶಹಾಪುರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿ ನಿಂಗಪ್ಪನನ್ನು ಶಹಾಪುರ ಪೊಲೀ‌ಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಸಕಲೇಶಪುರ: ಭೂಕುಸಿತ ಹಿನ್ನೆಲೆ- 10 ರೈಲುಗಳ ಸಂಚಾರ ರದ್ದು..!!

 

 

error: Content is protected !!
Scroll to Top