ಸಿಎಸ್‌ಇಇಟಿ ಅರ್ಹತಾ ಪರೀಕ್ಷೆಯಲ್ಲಿ  ಕ್ರಿಯೇಟಿವ್ ಪಿಯು ಕಾಲೇಜಿನ 11 ವಿದ್ಯಾರ್ಥಿಗಳು ಆಯ್ಕೆ..!

(ನ್ಯೂಸ್ ಕಡಬ)newskadaba.com ಕಾರ್ಕಳ,ಮೇ.19 ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಮೇ 6, 2023 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ ಸಿಎಸ್‌ಇಇಟಿ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ 11 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್‌ನ ವಿದ್ಯಾರ್ಥಿಗಳು ಪಿಯುಸಿಯಲ್ಲೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಆಡಳಿತ ಮಂಡಳಿಯವರು, ಉಪನ್ಯಾಸಕವರ್ಗ, ಸಿಎಸ್‌ಇಇಟಿ ಸಂಯೋಜಕರಾದ ರಾಘವೇಂದ್ರ ಬಿ ರಾವ್ ಮತ್ತು ಉಮೇಶ್ ಅಭಿನಂದಿಸಿ, ಶುಭಹಾರೈಸಿದ್ದಾರೆ.

Also Read  ನೀಟ್ ಯುಜಿ ಮರುಪರೀಕ್ಷೆಯ ಮನವಿ ತಿರಸ್ಕರಿಸಿದ ಸುಪ್ರಿಂ ಕೋರ್ಟ್

 

error: Content is protected !!
Scroll to Top