ಪಟಾಕಿ ಮದ್ದು ಸೇವಿಸಿ ಬಾಲಕ ಮೃತ್ಯು.!

(ನ್ಯೂಸ್ ಕಡಬ)newskadaba.com ಮಂಡ್ಯ,ಮೇ.19 ಪಟಾಕಿ ಮದ್ದು ಸೇವಿಸಿ ಬಾಲಕ ಮೃತಪಟ್ಟ ಘಟನೆ ಹಲಗೂರು ಸಮೀಪದ ಧನಗೂರು ಗ್ರಾಮದಲ್ಲಿ ನಡೆದಿದೆ. ಮಹಮ್ಮದ್ ಅಯುಬ್ ಎಂಬುವವರ ಫಾರಂ ಹೌಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಕಮಲನಾಥ್ ಅವರ ಪುತ್ರ ಸೂರಜ್ ಮೃತಪಟ್ಟ ಬಾಲಕ.

ಜಮೀನಿನಲ್ಲಿ ಕೋತಿಗಳ ಹಾವಳಿ ತಡೆಯಲು ಪಟಾಕಿ ಸಿಡಿಸಲಾಗಿತ್ತು. ಪಟಾಕಿಯಲ್ಲಿ ಬಳಕೆ ಮಾಡಿದ್ದ ಮದ್ದು ತೋಟದಲ್ಲಿ ಇದ್ದು, ಆಟವಾಡಲು ಹೋಗಿದ್ದ ಬಾಲಕ ಮದ್ದು ಸೇವಿಸಿ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಮಳವಳ್ಳಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Also Read  ಅಗ್ನಿವೀರರಿಗೆ ರೈಲ್ವೆಯಿಂದ ಶೇ 15ರಷ್ಟು ಮೀಸಲಾತಿ.!

 

error: Content is protected !!
Scroll to Top