ವೃದ್ಧನ ಜೇಬಲ್ಲಿದ್ದ ಮೊಬೈಲ್ ಸ್ಫೋಟ.!➤ ಅದೃಷ್ಟವಶಾತ್ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕೇರಳ,ಮೇ.19 ಕೇರಳದ ತ್ರಿಶೂರು ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೇಬಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಶರ್ಟ್ ಜೇಬಲ್ಲಿ ಮೊಬೈಲ್ ಇಟ್ಟುಕೊಂಡು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಏಕಾಏಕಿ ಮೊಬೈಲ್ ಸ್ಪೋಟಗೊಂಡಿದೆ.

ಕೂಡಲೇ ಅದನ್ನು ಕೆಳಗೆ ಎಸೆದಿದ್ದಾರೆ. ಮೊಬೈಲ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸಮಯ ಪ್ರಜ್ಞೆಯಿಂದಾಗಿ ವೃದ್ಧ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

error: Content is protected !!

Join WhatsApp Group

WhatsApp Share