ಭೂಮಿಯಂತಿರುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದ ಖಗೋಳಶಾಸ್ತ್ರಜ್ಞರು.!

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ,ಮೇ.19 ಭೂಮಿಯ ಗಾತ್ರ ಇರುವ ಗ್ರಹವೊಂದನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಇದಕ್ಕೆ “ಎಲ್‌ಪಿ 791-18ಡಿ” ಎಂದು ನಾಮಕರಣ ಮಾಡಿದ್ದಾರೆ.ಈ ಗ್ರಹವು ಜ್ವಾಲಾಮುಖೀಗಳಿಂದ ಕೂಡಿದ್ದು, ಇಲ್ಲಿ ಮಾನವರು ಜೀವನ ನಡೆಸಲು ಅನುಕೂಲವಾಗಿರುವ ವಾತಾವರಣ ಇರಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಈ ಗ್ರಹವು ತನ್ನಿಂದ 90 ಜ್ಯೋತಿರ್ವರ್ಷ ದೂರವಿರುವ ಕೆಂಪು ಕುಬ್ಜ ನಕ್ಷತ್ರವನ್ನು ಸುತ್ತುತ್ತಿದೆ. ಈ ನಕ್ಷತ್ರದ ಹೆಸರು “ಕ್ರೇಟರ್‌”. ಈ ಗ್ರಹದಲ್ಲಿ ಅಗ್ಗಿಂದಾಗೆ ಜ್ವಾಲಾಮುಖೀಗಳು ಸ್ಫೋಟಗೊಳ್ಳುತ್ತಿವೆ ಎಂದು ಅಮೆರಿಕದ ಹಾರ್ವರ್ಡ್‌ ವಿವಿ ಮತ್ತು ಸ್ಮಿತ್‌ಸೋನಿಯನ್‌ ಸಂಸ್ಥೆಯ ಖಗೋಳ ಭೌತಶಾಸ್ತ್ರ ವಿಭಾಗದ ಸಂಶೋಧಕರ ತಂಡ ತಿಳಿಸಿದೆ.

Also Read  ಜಾಮೀನು ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಅಮೆರಿಕದ ನಾಸಾದ ಟ್ರಾನ್ಸಿಟಿಂಗ್‌ ಎಕ್ಸೋಪ್ಲಾನೆಟ್‌ ಸರ್ವೆ ಸ್ಯಾಟಲೈಟ್‌(ಟಿಇಎಸ್‌ಎಸ್‌) ಮತ್ತು ಸ್ಪಿಟ್ಜರ್‌ ಬಾಹ್ಯಾಕಾಶ ದೂರದರ್ಶಕ ಬಳಸಿ ಖಗೋಳಶಾಸ್ತ್ರಜ್ಞರು ಈ ಸಂಶೋಧನೆ ನಡೆಸಿದ್ದಾರೆ. ಅಲ್ಲದೇ ಈ ಸಂಶೋಧನಾತ್ಮಕ ಅಧ್ಯಯನವನ್ನು “ನೇಚರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ.

 

 

error: Content is protected !!
Scroll to Top