ಪತ್ನಿ ಹಾಗೂ ಮಕ್ಕಳ ಮೇಲೆ ಚಾಕು ಇರಿತ.!➤ ಬಳಿಕ ಪತಿ ನೇಣಿಗೆ ಶರಣು

(ನ್ಯೂಸ್ ಕಡಬ)newskadaba.com ದೆಹಲಿ,ಮೇ.18 ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ನ ಉದ್ಯೋಗಿಯಾಗಿದ್ದ 43 ವರ್ಷದ ವ್ಯಕ್ತಿಯೊಬ್ಬರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಇರಿದು, ತಾವೂ ನೇಣಿಗೆ ಶರಣಾಗಿರುವ ಘಟನೆ, ಶಹದಾರಾದಲ್ಲಿರುವ ಜ್ಯೋತಿ ಕಾಲೋನಿಯಲ್ಲಿ ನಡೆದಿದೆ.ಸುಶೀಲ್ ಕುಮಾರ್ ಎನ್ನುವವರು ನೇಣಿಗೆ ಶರಣಾಗಿರುವ ದುರ್ದೈವಿ.

ಈ ಘಟನೆಯಲ್ಲಿ ಪತ್ನಿ ಅನುರಾಧಾ (40), ಪುತ್ರಿ ಅದಿತಿ (6) ಮೃತಪಟ್ಟಿದ್ದಾರೆ. ಅದೃಷ್ಟವಶಾತ್ 13 ವರ್ಷದ ಪುತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.ದೆಹಲಿಯ ಪೂರ್ವ ವಿನೋದ ನಗರ ಡಿಪೋದಲ್ಲಿ ಸುಶೀಲ್ ಕುಮಾರ್ ನಿರ್ವಹಣಾ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Also Read  ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ ಓರ್ವನನ್ನು ಹತ್ಯೆಗೈದ ಭಾರತೀಯ ಸೇನಾಪಡೆ

 

 

error: Content is protected !!
Scroll to Top