ಗುಂಡು ಹಾರಿಸಿ ಯುವಕನನ್ನು ಹತ್ಯೆಗೈದ ದುಷ್ಕರ್ಮಿಗಳು.!

(ನ್ಯೂಸ್ ಕಡಬ)newskadaba.com ದೆಹಲಿ,ಮೇ.18 ದೆಹಲಿಯ ಜಾಮಾ ಮಸೀದಿ ಬಳಿ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿದ್ದಾರೆ. ಮೃತಪಟ್ಟವರನ್ನು ಚಾವ್ರಿ ಬಜಾರ್ ನಿವಾಸಿ ಸಮೀರ್ ಎಂದು ಗುರುತಿಸಲಾಗಿದೆ. ಸಮೀರ್ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಜಗಳದ ವೇಳೆ ಸಮೀರ್ ಮಧ್ಯ ಪ್ರವೇಶಿಸಿದ್ದರು, ಆದರೆ ದುಷ್ಕರ್ಮಿಗಳು ಅಲ್ಲಿಯೇ ಗುಂಡು ಹಾರಿಸಲು ಶುರು ಮಾಡಿದ್ದರು. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಮೀರ್ ತಲೆಗೆ ಗುಂಡು ತಗುಲಿತ್ತು. ಗಾಯಗೊಂಡಿದ್ದ ಸಮೀರ್​ನನ್ನು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಸಮೀರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Also Read  ಗೀಸರ್‌ನಿಂದ ಗ್ಯಾಸ್ ಸೋರಿಕೆ ➤ ಉಸಿರುಗಟ್ಟಿ ದಂಪತಿ ಮೃತ್ಯು..!

 

 

 

 

error: Content is protected !!
Scroll to Top