ನಿಶ್ಚಿತಾರ್ಥದ ಹಿಂದಿನ ದಿನ ಗುಂಡು ಹಾರಿಸಿ ಪ್ರೇಯಸಿಯನ್ನು ಹತ್ಯೆಗೈದ ಪ್ರಿಯಕರ.!

(ನ್ಯೂಸ್ ಕಡಬ)newskadaba.comಧ್ಯಪ್ರದೇಶ,ಮೇ.18 ನಿಶ್ಚಿತಾರ್ಥದ ಹಿಂದಿನ ದಿನ ತನ್ನ ಸಂಗಾತಿಯನ್ನು ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.ಪೊಲೀಸರ ಪ್ರಕಾರ ದಸ್ತೋಯ್ ಗ್ರಾಮದ ಆರೋಪಿ ಸೋನು ಪ್ರಜಾಪತಿ ಡೈರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ಆತ ಫೂಲ್‌ಗರ್ಹಿಯಲ್ಲಿರುವ ನೀತು ಪ್ರಜಾಪತಿ ಮನೆಗೆ ನುಗ್ಗಿ ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ. ಈ ವೇಳೆ ಸಂತ್ರಸ್ತೆಯ ಕುಟುಂಬವು ಅವನನ್ನು ಹಿಡಿಯಲು ಪ್ರಯತ್ನಿಸಿತು. ಆದರೆ ಅವನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ನಂತರ ಅವನು ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಹಿರಿಯ ಕಾಂಗ್ರೇಸ್ ನಾಯಕ ಅಹ್ಮದ್ ಪಟೇಲ್ ನಿಧನ

 

 

error: Content is protected !!
Scroll to Top