ಮಂಗಳೂರು: ಬಾಲಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ ಬಿರುವೆರ್ ಕುಡ್ಲ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.18. ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ನೇತೃತ್ವದಲ್ಲಿ 2 ವರ್ಷದ ಬಾಲಕನಿಗೆ 50,000 ರೂಪಾಯಿ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.

ಮೇ 17 ರಂದು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಕುಪ್ಪೆ ಪದವಿನ ಜಯಶೀಲ ಮತ್ತು ಸದಾಶಿವ ಆಚಾರ್ಯ ಅವರ ಪುತ್ರ ಎರಡು ವರ್ಷದ ಬಾಲಕನ ಚಿಕಿತ್ಸೆಗಾಗಿ 50,000 ರೂಪಾಯಿಗಳ ಚೆಕ್ ಅನ್ನು ಕ್ಷೇತ್ರದ ಮೊಕ್ತೇಸರ ಸಾಯಿರಾಮ್ ಹಸ್ತಾಂತರಿಸಿ ಬಿರುವೆರ್ ಕುಡ್ಲ ಸಮಾಜಮುಖಿ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

Also Read  ಉಡುಪಿ: 'ಇಸ್ಕಾನ್ ಧಾರ್ಮಿಕ ನಾಯಕರ ಬಂಧನ ಖಂಡನೀಯ'- ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

error: Content is protected !!
Scroll to Top