ವಿಧಾನಸಭೆ ಚುನಾವಣೆ ಸೋಲಿಗೆ ಎದೆಗುಂದಬೇಡಿ..!➤ಎಚ್‌.ಡಿ.ದೇವೇಗೌಡ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.18 ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಎದೆಗುಂದದೆ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಿ ಬಲ ತುಂಬುವ ಕೆಲಸ ಮಾಡೋಣ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಈ ಕುರಿತು ಭಾವನಾತ್ಮಕವಾಗಿ ಪಕ್ಷದ ಮುಖಂಡರಿಗೆ ಪತ್ರ ಬರೆದಿರುವ ಅವರು, ಪ್ರಜಾಪ್ರಭುತ್ವದ ಚುನಾವಣೆ ವ್ಯವಸ್ಥೆಯಲ್ಲಿ ಏಳು-ಬೀಳು ಸಹಜ. ಆದರೆ, ಪಕ್ಷಕ್ಕೆ ದೊರೆತಿರುವ ಫ‌ಲಿತಾಂಶದಿಂದ ಯಾರೂ ಎದೆಗುಂದಬಾರದು ಎಂದು ಮನವಿ ಮಾಡಿದ್ದಾರೆ.

 

 

error: Content is protected !!
Scroll to Top