ವಿಟ್ಲ: ಪತ್ರಕರ್ತರೋರ್ವರ ಮೇಲೆ ದಾಳಿ ನಡೆಸಿದ ಒಂಟಿ ಮಂಗ ► ಗಾಯಾಳು ಪತ್ರಕರ್ತ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜ.17. ಪತ್ರಕರ್ತರೋರ್ವರಿಗೆ ಗಂಡು ಮಂಗವೊಂದು ದಾಳಿ ನಡೆಸಿ ಅವರ ಕಾಲನ್ನು ತಿವಿದು ತೀವ್ರ ತರದಲ್ಲಿ ಗಾಯಗೊಳಿಸಿದ ಘಟನೆ ಬುಧವಾರದಂದು ವಿಟ್ಲದಲ್ಲಿ ನಡೆದಿದೆ.

ಗಾಯಾಳು ಪತ್ರಕರ್ತನನ್ನು ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ವಿ.ಟಿ ಪ್ರಸಾದ್ ಎಂದು ಗುರುತಿಸಲಾಗಿದೆ. ಪ್ರಸಾದ್ ಬುಧವಾರದಂದು ತನ್ನ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಗಂಡು ಮಂಗ ದಾಳಿ ಮಾಡಿ ಅವರ ಬಲಕಾಲನ್ನು ತಿವಿದು ಗಾಯಗೊಳಿಸಿದೆ. ತಕ್ಷಣವೇ ಪ್ರಸಾದ್ ಅವರನ್ನು ವಿಟ್ಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕಾಲಿನ ನರಗಳಿಗೆ ತೀವ್ರ ರೀತಿಯ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Also Read  ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ► ಕಲ್ಲುಗುಡ್ಡೆ: ಅಕ್ರಮ ಕಟ್ಟಡದಲ್ಲಿನ ಮದ್ಯದಂಗಡಿ ಮುಚ್ಚಲು ಆದೇಶ

error: Content is protected !!
Scroll to Top