ಪೊಲೀಸರಿಗೆ ಚಪ್ಪಲಿಯಿಂದ ಥಳಿಸಿದ ಕ್ರಿಕೆಟಿಗರು..!

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ,ಮೇ.18 ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ರಣಜಿ ಕ್ರಿಕೆಟ್ ಆಟಗಾರರನ್ನು ಥಳಿಸಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ ಕೆಲವೇ ದಿನಗಳಲ್ಲಿ ಘಟನೆ ಹೊಸ ತಿರುವು ಪಡೆದುಕೊಂಡಿದೆ.

ಇದೀಗ ಕ್ರಿಕೆಟಿಗರು ಪೊಲೀಸರಿಗೆ ಚಪ್ಪಲಿಯಿಂದ ಥಳಿಸುವ ವಿಡಿಯೋ ಹರಿದಾಡುತ್ತಿದೆ. ಹೊಸ ವಿಡಿಯೋದ ಆಧಾರದ ಮೇಲೆ ಹಿರಿಯ ಅಧಿಕಾರಿಗಳಿಗೆ ಹೊಸ ವರದಿಯನ್ನು ಕಳುಹಿಸಲಾಗಿದೆ ಎಂದು ಸಿವಿಲ್ ಲೈನ್ಸ್ ಪ್ರದೇಶದ ವಲಯ ಅಧಿಕಾರಿ ಅರವಿಂದ್ ಚೌರಾಸಿಯಾ ತಿಳಿಸಿದ್ದಾರೆ. ಅಧಿಕಾರಿಗಳು ಹೊಸ ಸಾಕ್ಷ್ಯಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

Also Read  ಸವಣೂರು : ಇನ್ಸ್ಟಾಗ್ರಾಂ ಮೂಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೆಸ್ಕಂ ಉದ್ಯೋಗಿ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

 

 

.

 

error: Content is protected !!
Scroll to Top