ಉಳ್ಳಾಲ:70 ಲಕ್ಷ ರೂ. ಲಾಟರಿ ಗೆದ್ದರೂ ಪತ್ತೆಯಾಗದ ಅದೃಷ್ಟಶಾಲಿ !

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.18. ಲಾಟರಿ ಟಿಕೆಟ್ ಗಳು ಅದೆಷ್ಟೋ ಜನರ ಜೀವನವನ್ನು ಹಾಳು ಮಾಡಿದೇ ಅಲ್ಲದೇ ಕೆಲವೊಬ್ಬರಿಗೆ ಅದೃಷ್ಟವನ್ನು ತಂದುಕೊಟ್ಟಿದೆ. ಅದೇ ರೀತಿ ಇಲ್ಲೊಬ್ಬರಿಗೆ 70 ಲಕ್ಷ ರೂ. ಬಂಪರ್‌ ಬಹುಮಾನ ಒಲಿದು ಬಂದರೂ ಲಾಟರಿ ವಿಜೇತ ಅದೃಷ್ಟಶಾಲಿ ವ್ಯಕ್ತಿ ಯಾರು ಎಂದು ತಿಳಿದುಬಂದಿಲ್ಲ.


ಗಡಿ ಭಾಗವಾದ ತಲಪಾಡಿಯಲ್ಲಿರುವ ಅಮಲ್‌ ಕನಕದಾಸ ಅವರಿಗೆ ಸೇರಿದ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮೇ 7ರಂದು ಮಾರಾಟವಾದ ಕೇರಳ ರಾಜ್ಯದ ಅಕ್ಷಯ ಲಾಟರಿ ಟಿಕೆಟ್‌ (ನಂಬರ್‌: ಎ.ಟಿ. 317545) ಇದಾಗಿದ್ದು, ಇನ್ನೂ ಈ ಟಿಕೆಟ್‌ ಖರೀದಿಸಿದ ವ್ಯಕ್ತಿ ಈ ವರೆಗೆ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಏಜೆನ್ಸಿಯವರು ಬಂಪರ್‌ ಬಹುಮಾನ ವಿಜೇತನಿಗಾಗಿ ಕಾಯುತ್ತಿದ್ದಾರೆ.

Also Read  ► ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ, ಹೊಸ್ತಾರೋಹಣ, ಆಯುಧ ಪೂಜೆ

error: Content is protected !!
Scroll to Top