ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದ ಖರ್ಗೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.18. ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಸಿಎಲ್ ಪಿ ಸಭೆಯಲ್ಲಿ ನಡೆಯಬೇಕಿದೆ. ಹೀಗಿರುವಾಗ, ಯಾವ ಕಾರಣಕ್ಕೆ ಈ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಮೂಲದ ಪ್ರಕಾರ, ಸಿಎಂ ಆಯ್ಕೆ ವಿಚಾರ ಯಾವುದೇ ಗೊಂದಲವಿಲ್ಲದೆ ಫೈನಲ್‌ ಆಗಿದೆ ಎಂಬ ಸಂದೇಶವನ್ನು ಖರ್ಗೆ ನೀಡುವ ಸಾಧ್ಯತೆಯಿದೆ.

Also Read  ಉಪ್ಪಿನಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಕಬ್ ಶಿಕ್ಷಕ ಪುರುಷೋತ್ತಮ ಗೌಡ ನಿಧನ

 

error: Content is protected !!
Scroll to Top