ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಭರದ ಸಿದ್ಧತೆ ➤ ನಾಳೆ (ಮೇ.18) 3.30ಕ್ಕೆ ಕಾರ್ಯಕ್ರಮ ?

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.17. ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸುವುದು ಬಹುತೇಕ ಪಕ್ಕಾ ಆಗಿದೆ. ಇನ್ನೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್​ಗೆ ಪ್ರಚಂಡ ಗೆಲುವು ಹಾಗೂ ದೊಡ್ಡ ಮಟ್ಟದಲ್ಲಿ ಸೀಟು ಬಂದಿವೆ. ಹೀಗಾಗಿ ಸಿಎಂ ಪ್ರಮಾಣವಚನ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.

ಮೇ 18ರ ನಾಳೆ ಮಧ್ಯಾಹ್ನ 3.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ. ವಿಧಾನಸೌಧ ಮುಂಭಾಗ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ನಾಳೆ ತಪ್ಪಿದರೆ ಶನಿವಾರ ಅಂದರೆ ಮೇ 20ರಂದು ಕಾರ್ಯಕ್ರಮ ನಿಗದಿ ಮಾಡುವ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆ ನಡೆದಿದೆ. ಅಮಾವಾಸ್ಯೆ ಇರುವ ಹಿನ್ನಲೆ ಪ್ರಮಾಣ ವಚನ ಬೇಡ ಎಂಬ ಬಗ್ಗೆ ಕೆಲವರ‌ ಸಲಹೆ ನೀಡಿದ್ದಾರೆ.

Also Read  ಮಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಕೆಎಸ್ಸಾರ್ಟಿಸಿಯಿಂದ ಹಣ ಲೂಟಿ ➤ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕೆಎಸ್ಸಾರ್ಟಿಸಿ- ಪ್ರಯಾಣಿಕರ ಅಳಲು

 

error: Content is protected !!
Scroll to Top