ಮೋಚಾ ಚಂಡಮಾರುತಕ್ಕೆ ತತ್ತರಿಸಿದ ಜನ..!➤ ಮೃತಪಟ್ಟವರ ಸಂಖ್ಯೆ 81ಕ್ಕೆ ಏರಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.17 ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಮೋಚಾ ಚಂಡಮಾರುತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮ್ಯಾನ್ಮಾರ್ ದೇಶದಲ್ಲಿ ಇದುವರೆಗೂ 81ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ.ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ.

ದೊಡ್ಡ ಪ್ರಮಾಣದ ಪ್ರವಾಹಕ್ಕೆ ಭಾರಿ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ನಂತರ 209 ಕಿಲೋಮೀಟರ್ (130 ಮೈಲುಗಳು) ವೇಗದ ಗಾಳಿಯೊಂದಿಗೆ ರಾಖೈನ್ ರಾಜ್ಯದ ಸಿಟ್ವೆ ಟೌನ್‌ಶಿಪ್ ಬಳಿ ಮೋಚಾ ಚಂಡಮಾರುತ ಬಂದು ಅಪ್ಪಳಿಸಿದ್ದು, ಭೂಕುಸಿತ ಉಂಟು ಮಾಡಿತ್ತು. ಸೋಮವಾರ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ದುರ್ಬಲಗೊಂಡಿದ್ದು, ವ್ಯಾಪಕ ಪ್ರವಾಹವುಂಟು ಮಾಡಿತ್ತು.

ಭಾರಿ ಗಾಳಿಯ ರಭಸಕ್ಕೆ ಕಟ್ಟಡಗಳ ಮೇಲ್ಛಾವಣಿಗಳು ಕಿತ್ತುಹೋಗಿದ್ದು, ಫೋನ್ ಟವರ್​ಗಳು ನೆಲಕ್ಕುರುಳಿವೆ.10 ಶತಮಾನಗಳ ಹಿಂದೆ ಮ್ಯಾನ್ಮಾರ್‌ನ ರಾಜಧಾನಿಯಾಗಿದ್ದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಬಗಾನ್‌ನ ಕೇಂದ್ರ ನಗರ ಸೇರಿದಂತೆ ಮತ್ತಷ್ಟು ಒಳನಾಡಿನ ಪ್ರದೇಶಗಳು ಹಾನಿಗೊಳಗಾಗಿವೆ.

 

 

 

 

 

error: Content is protected !!

Join the Group

Join WhatsApp Group