(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.17. ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸು ಬಹುತೇಕ ಕಮರಿ ಹೋಗಿದೆ.
ಶತಾಯಗತಾಯ ಈ ಬಾರಿ ಸಿಎಂ ಖುರ್ಚಿಗೇರಬೇಕೆಂಬ ಆಸೆ ಹೊತ್ತಿದ್ದ ಕನಕಪುರದ ಬಂಡೆಗೆ ಈಗ ಭಾರೀ ನಿರಾಸೆಯಾಗಿದೆ. ಹೈಕಮಾಂಡ್ ಮುಂದೆ ಸಿದ್ದು ಅವರನ್ನು ಸಿಎಂ ಮಾಡುವುದಕ್ಕೆ ಅವರು ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ, ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಡಿಕೆಶಿ ಅವರ ಮುಂದಿನ ನಡೆ ಕೂಡ ಏನಾಗಿರಬಹುದು ಎಂಬುದು ಭಾರೀ ಕುತೂಹಲ ಮೂಡಿಸಿದೆ.
