ವಿಟ್ಲ: ಅನ್ಯಕೋಮಿನ ಯುವತಿಯ ಜೊತೆ ಅಸಭ್ಯವಾಗಿ ವರ್ತನೆ ಆರೋಪ ➤ ಆರೋಪಿಯ‌ ಬಂಧನ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.17. ದ್ವಿಚಕ್ರ ವಾಹನದಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಯುವಕನೋರ್ವ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.


ಕನ್ಯಾನದ ಅಬೂಬಕ್ಕರ್ ಬಂಧಿತ ಆರೋಪಿ ಎನ್ನಲಾಗಿದೆ. ವಿಟ್ಲ ಕಸಬ ಗ್ರಾಮದ ಕಡಂಬು ಸಮೀಪದ ಬನ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನ್ಯಕೋಮೀನ ಯುವತಿಯ ಜೊತೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರು ದಾಖಲಾಗಿತ್ತು.ಈ ಕುರಿತು ಸಿಸಿಟಿವಿ ದೃಶ್ಯಾಧರಿಸಿ ಆರೋಪಿಯ ಬಂಧನ ನಡೆದಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group