ಜಾನುವಾರು ಸಾಗಾಟ ವೇಳೆ ಇದ್ರಿಸ್ ಪಾಷಾ ಹತ್ಯೆ ಪ್ರಕರಣ➤ಪುನೀತ್ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.17 ಜಾನುವಾರ ಸಾಗಾಟ ವೇಳೆ ಇದ್ರಿಸ್ ಪಾಷಾ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿ ಐವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.ಜಾಮೀನು ಕೋರಿ ಪುನೀತ್, ಎ.ಎನ್.ಪವನ್ ಕುಮಾರ್, ಪಿ.ಲಿಂಗಪ್ಪ, ಗೋಪಿ, ಸುರೇಶ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ದ ರಜಾಕಾಲದ ಪೀಠ ಮಾನ್ಯ ಮಾಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ ಶ್ಯಾಮ್, ಇದ್ರಿಸ್ ಪಾಷಾ ಮರಣೋತ್ತರ ಪರೀಕ್ಷೆಯಲ್ಲಿ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಉಲ್ಲೇಖವಾಗಿದೆ. ಆದರೆ ಗಂಭೀರ ಗಾಯಗಳ ಬಗ್ಗೆ ಮಾಹಿತಿ ಇಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ವಿಚರಣೆ ನಡೆಸಲಾಗಿದ್ದು, ತನಿಖೆ ಪೂರ್ಣಗೊಡಿದೆ. ಆರೋಪ ಪಟ್ಟಿ ಸಲ್ಲಿಕೆಯಾಗಿ, ವಿಚಾರಣೆ ನಡೆಯಬೇಕು. ಆದ್ದರಿಂದ ಜಾಮೀನು ಮಂಜೂರು ಮಾಡುವಂತೆ ಕೋರಿದ್ದರು.

Also Read  Pin Up Casino Пин Ап Официальный Сайт Онлайн Казино Pin Up%2C Игровые Автоматы%2C Регистраци

 

 

 

error: Content is protected !!
Scroll to Top