ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.16. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಇತ್ತಂಡಗಳವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿದೆ‌. ಒಂದು ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಎದುರುಕಜೆ ನಿವಾಸಿ ಅಬ್ದುಲ್ ರಹಿಮಾನ್ ರವರ ಪುತ್ರ ಅಬ್ದುಲ್ ಅಜೀಜ್ ದೂರುದಾರರಾಗಿದ್ದು, ಅಬೂಬಕ್ಕರ್‌ ಸಿದ್ದಿಕ್‌ ಆರೋಪಿಯಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಮರಕ್ಕಿಣಿ ನಿವಾಸಿ ಅಬ್ದುಲ್ಲ ರವರ ಪುತ್ರ ಅಬೂಬಕ್ಕರ್‌ ಸಿದ್ದೀಕ್‌ ದೂರುದಾರರಾಗಿದ್ದು, ಅಪ್ರಾಝ್‌ ಅಲಿಯಾಸ್ ಅಜೀಜ್‌, ಜಲೀಲ್‌ , ಇಶಾಮ್‌, ಫರ್‌ಹಾನ್‌ ರವರು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

Also Read  ಕೀರ್ನಾನ್ ಫೋರ್ಬ್ಸ್ ಗುಂಡೇಟಿಗೆ ಬಲಿ

 

error: Content is protected !!
Scroll to Top