‘ನಾನು ತಪ್ಪು, ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ..!➤ಮುನಿರಾಜು

(ನ್ಯೂಸ್ ಕಡಬ) newskadaba.com ಮಂಡ್ಯ,ಮೇ.17 ಚುನಾವಣೆ ಮುಗಿದ ಬಳಿಕ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ಹೊರ ಹಾಕಿ ಮಾತನಾಡಿದ ಪರಾಜಿತ ಅಭ್ಯರ್ಥಿ11 ಮುನಿರಾಜು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವಂತೆ ದೇವರ ಮೊರೆ ಹೋಗಿದ್ದಾರೆ.ಈ ಸಂದರ್ಭ ಅವರು ‘ನಾನು ತಪ್ಪು, ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ.ಇಲ್ಲ ತನ್ನ ವಿರುದ್ದ ಅಪಪ್ರಚಾರ ಮಾಡಿದವರ ವಂಶ ನಿರ್ನಾಮವಾಗಲ’ ಎಂದು ಅಪಪ್ರಚಾರ ಮಾಡಿದವರ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಲ್ಲಿ ಬೇಡಿಕೊಂಡಿದ್ದಾರೆ.

ದೇವರ ಮುಂದೆ ಕರ್ಫೂರ ಹಚ್ಚಿ ಶಫಥಗೈದಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರಾಜು, ಕೇವಲ 24 ಸಾವಿರ ಮತಗಳಿಸಲು ಶಕ್ತವಾಗಿದ್ದರು. ಇದೀಗ ಅಪಪ್ರಚಾರದ ವಿರುದ್ದ ಸಿಡಿದೆದ್ದಿರುವ ಮುನಿರಾಜು ದೇವರ ಮೊರೆ ಹೋಗಿದ್ದಾರೆ. ಮಳವಳ್ಳಿಯ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ಸ್ವಾಮಿ ಮುಂದೆ ತೆಂಗಿನ ಕಾಯಿಗೆ ಕರ್ಫೂರ ಹಚ್ಚಿ, ಈಡುಗಾಯಿ ಹೊಡೆದು ದೇವರಿಂದ ಶಿಕ್ಷಗೆ ಒತ್ತಾಯ ಮಾಡಿದ್ದು ಅಪಪ್ರಚಾರಗೈದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Also Read  ತ್ರಿವಳಿ ತಲಾಕ್ ರದ್ದು ► ಕೋಡಿಂಬಾಳದಲ್ಲಿ ಬಿಜೆಪಿ ಮಹಿಳಾ ಮೊರ್ಚಾದಿಂದ ಸಂಭ್ರಮಾಚರಣೆ

 

 

 

error: Content is protected !!
Scroll to Top