ಆಟೋಗೆ ಲಾರಿ ಡಿಕ್ಕಿ..!➤ಐವರು ಕೂಲಿ ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ) newskadaba.com  ತೆಲಂಗಾಣ,ಮೇ.17 ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಐವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಎಪಿಯ ಪಲ್ನಾಡು ಜಿಲ್ಲೆಯಲ್ಲಿ ಸಂಭವಿಸಿದೆ. ಹತ್ತು ಮಂದಿ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಸಹಾಯದಿಂದ ಸ್ಥಳೀಯ ಗುರ್ಜಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ರಸ್ತೆ ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಮುಂಭಾಗ ನಜ್ಜುಗುಜ್ಜಾಗಿದೆ. ಇದರಿಂದ ಮೃತರ ಪೈಕಿ ಹೆಚ್ಚಿನವರು ಆಟೋ ಮುಂಭಾಗದಲ್ಲಿಯೇ ಕುಳಿತಿದ್ದರು. ಅಪಘಾತದ ವೇಳೆ ಆಟೋದಲ್ಲಿ ಒಟ್ಟು 23 ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ನಲ್ಗೊಂಡ ಜಿಲ್ಲೆಯವರು ದಾಮರಚಾರ್ಲ ಮಂಡಲ ನರಸಾಪುರ ನಿವಾಸಿಗಳು.ಕೂಲಿ ಕಾರ್ಮಿಕರೆಲ್ಲರೂ ಗುರ್ಜಾಲ ಮಂಡಲದ ಪುಲಿಪಾಡುವಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

Also Read  ಕೇರಳದಲ್ಲಿ ಅಜ್ಜ-ಅಜ್ಜಿಯ ಕೊಲೆ- ಆರೋಪಿ ಮಂಗಳೂರಿನಲ್ಲಿ ಅರೆಸ್ಟ್

 

 

 

 

error: Content is protected !!
Scroll to Top