ಬಂಟ್ವಾಳ: ಸರ್ಕಾರಿ ಕಾಮಗಾರಿ 30 ಚೀಲ ಸಿಮೆಂಟ್ ವಶ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.17. ಅರಳ ಗ್ರಾಮದ ಕಲ್ಪನೆ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಸನಿಹ ಸರಕಾರಿ ಕಾಮಗಾರಿಗೆ ಬಳಸುವ ಮಾರಾಟ ಮಾಡಲು ಅವಕಾಶ ಇಲ್ಲದ ಸಿಮೆಂಟ್ ಗೋಣಿಗಳು ಪತ್ತೆಯಾಗಿದ್ದು ದೂರಿನ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಬಂಟ್ವಾಳ ತಹಶೀಲ್ದಾರ್ ಎಸ್.ಬಿ. ಕೂಡಲಗಿ ನೇತೃತ್ವದಲ್ಲಿ ತಂಡ ದಾಳಿ ನಡೆಸಿ ೩೦ ಚೀಲ ಸಿಮೆಂಟ್ ಚೀಲ ವಶಪಡಿಸಿಕೊಂಡಿದೆ.


ರಸ್ತೆ ಕಾಮಸ್ಗಾರಿಗೆ ಸಿಮೆಂಟ್ ತರಿಸಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಮೆಂಟ್ ಖಾಸಗಿ ಕಾಮಗಾರಿ ನಡೆಯುತ್ತಿರುವುದು ಬೆಳಕಿಗೆ ಬಂದಿಲ್ಲ. ಮುಂದೆ ಅದು ಯಾವ ಇಲಾಖೆಗೆ ಸಂಬಂಧಿಸಿದೆ ಎಂಬುವುದನ್ನು ಪರಿಶೀಲಿಸಿ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

Also Read  ಉಡುಪಿ: ಮಧ್ಯ ಸೇವನೆಗೆ ಹಣವಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

 

 

error: Content is protected !!
Scroll to Top