ಬಂಟ್ವಾಳ: ಉಚಿತವಾಗಿ ನೀರು ಒದಗಿಸಿ ಮಾನವೀಯತೆ ಮೆರೆದ ಕೃಷಿಕ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.16. ಈ ಬಾರಿ ಬೇಸಿಗೆಯ ಕಾವು ಹೆಚ್ಚಾಗಿದೆ, ನದಿಗಳು ಸಹಿತ ಅಂತರ್ಜಲವೆಲ್ಲಾ ಬತ್ತಿ ಎಲ್ಲೆಡೆ ನೀರಿನ ಸಮಸ್ಯೆ ಕಾಡುತ್ತಿದೆ. ಬಿರು ಬಿಸಿಲಿನಿಂದಾಗಿ ನೀರಿನ ಒರತೆಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದಿದೆ.

ಬಂಟ್ವಾಳ ತಾಲೂಕಿನ ಎಲಿಯ ನಡುಗೋಡು ಗ್ರಾಮದ ಉಪ್ಪಿರ ಪರಿಸರದಲ್ಲೂ ನೀರಿನ ಸಮಸ್ಯೆ ತಲೆದೋರಿದ್ದು, ಹೊಕ್ಕಾಡಿಗೋಳಿಯ ಉದ್ಯಮಿ, ಕೃಷಿಕ ರಾಘವೇಂದ್ರ ಭಟ್ ಎಂಬವರು ಪರಿಸರದ ಸುಮಾರು ಹಲವು ಮನೆಗಳಿಗೆ ಕಳೆದ ಕೆಲ ದಿನಗಳಿಂದ ಉಚಿತವಾಗಿ ವಾಹನದ ಮೂಲಕ ನೀರು ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

Also Read  ಕೊರೊನಾ ವಾರಿಯರ್ಸ್‌ಗೆ ಸಂಬಳ ನೀಡದೆ ನಿರ್ಲಕ್ಷ್ಯ ➤ ಯು.ಟಿ ಖಾದರ್‌ ಆಕ್ರೋಶ

error: Content is protected !!
Scroll to Top