ಶಿವಮೊಗ್ಗ: ಹಣಕ್ಕಾಗಿ ಯುವತಿ ಅಪಹರಣ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಮೇ.16. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣಕ್ಕಾಗಿ ಯುವತಿಯೊಬ್ಬಳನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ.


ರಂಜಿತಾ (22) ಎಂಬ ಯುವತಿ ಹಣಕ್ಕಾಗಿ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಇನ್ನು ಯುವತಿಯು ಸುಮಾರು 5.1 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 08182-261400, 261413, 261416ನ್ನು ಸಂಪರ್ಕಿಸಬಹುದೆಂದು ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮನೆಯಲ್ಲಿರುವ ಹಲ್ಲಿ ಓಡಿಸಲು ಇಲ್ಲಿದೆ ಸುಲಭ ಉಪಾಯ ➤ ಹೇಗೆ ಎಂಬುದನ್ನ ನೀವೆ ನೋಡಿ

error: Content is protected !!
Scroll to Top