ಆಸ್ಪತ್ರೆಗೆ ನುಗ್ಗಿ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆಗೈದ ಸಹೋದರ

(ನ್ಯೂಸ್ ಕಡಬ)newskadaba.com ದಾವಣಗೆರೆ, ಮೇ.15. ಮನೆ ಹಾಗೂ‌ ಆಸ್ತಿ ವಿಚಾರ ಹಿನ್ನೆಲೆಯಲ್ಲಿ ತಮ್ಮನೋರ್ವ ತನ್ನ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಆಸ್ಪತ್ರೆಯಲ್ಲಿ ನಡೆದಿದೆ.

ಹರಿಹರದ ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ (31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು, ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನ ಪುತ್ರ ರಾಜು ಹಾಗೂ ಮೊದಲನೇ ಪತ್ನಿ ಲಕ್ಷಮ್ಮನ ಕೊನೆಯ ಮಗನಾದ ಕುಮಾರ್ ಕೆ.ಜಿ ಅವರೊಂದಿಗೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

Also Read  ಮತ್ತೆ ಏರಿಕೆಯ ಹಾದಿಯಲ್ಲಿ ಕೊರೊನಾ ಕೇಸ್ ➤ ರಾಜ್ಯದಲ್ಲಿ 209 ಮಂದಿಗೆ ಪಾಸಿಟಿವ್

 

error: Content is protected !!
Scroll to Top