ಸುಳ್ಯ: ಕಾರ್ಯಕರ್ತರ ಶ್ರಮದ ಫಲವಾಗಿ ಗೆಲುವು ಸಿಕ್ಕಿದೆ ➤ ಶಾಸಕಿ ಭಾಗೀರಥಿ ಮುರುಳ್ಯ

(ನ್ಯೂಸ್ ಕಡಬ)newskadaba.com ಸುಳ್ಯ, ಮೇ.15. ಕಾರ್ಯಕರ್ತರ ಶ್ರಮದಿಂದ ನಾನು ಪ್ರಚಂಡ ಬಹುಮತದಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ವಿಜಯಿಯಾಗಲು ಕಾರಣವಾಗಿದೆ‌ ಎಂದು ಸುಳ್ಯದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಅವರು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ದೇವಳ ವಠಾರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜನರ ಮೂಲಭೂತ ಬೇಡಿಕೆಗಳಿಗೆ ತಕ್ಷಣ ಸ್ಪಂಧಿಸುವ ಕೆಲಸ ಮಾಡುತ್ತೇನೆ ಅಭಿವೃದ್ಧಿ ಕೆಲಸಗಳಿಗೆ ಜನರ ಸಹಕಾರ ಬೇಕೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಕಾಣಿಯೂರು: ಬೆಳಂದೂರಿನಲ್ಲಿ ಸೆ.14 ರಂದು ಉಚಿತ ಕೋವಿಡ್‌ ಟೆಸ್ಟ್

 

error: Content is protected !!
Scroll to Top