ಶಾಸಕ ನಾಗೇಂದ್ರಗೆ ಬೆದರಿಕೆ ಹಾಕಲು ಬಂದವರಿಗೆ ಗೂಸಾ.!   ಪ್ರಕರಣ ದಾಖಲು  

(ನ್ಯೂಸ್ ಕಡಬ) newskadaba.com ಳ್ಳಾರಿ,ಮೇ.15 ಶಾಸಕ ನಾಗೇಂದ್ರಗೆ ಬೆದರಿಕೆ ಹಾಕಲು ಬಂದವರಿಗೆ ಗೂಸಾ ಸಿಕ್ಕಿದೆ.ಕಾರ್ ನಲ್ಲಿ ತೆರಳುತ್ತಿದ್ದ ನಾಗೇಂದ್ರ ಅವರನ್ನ ಶುಭಾಶಯ ಕೊರಲು ನಾಲ್ವರು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದ ನಾಗೇಂದ್ರ, ಯುವಕರ ಬಳಿ ಹೊದಾಗ ಬೆದರಿಕೆ ಹಾಕಲು ನಾಲ್ವರು ಪುಂಡರು ಯತ್ನಿಸಿದ್ದಾರೆ.

ಈ ಸಂದರ್ಭ ಈ ನಾಲ್ವರ ಗುಂಪಿನ ಕೆಲವರ ಕೈಯಲ್ಲಿ ಮಾರಕಾಸ್ತ್ರ ಇರುವುದನ್ನ ಗಮನಿಸಿದ ನಾಗೇಂದ್ರ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಈ ನಾಲ್ವರನ್ನು ತಡೆದಿದ್ದಾರೆ. ಸ್ಥಳದಲ್ಲೇ ಇಬ್ಬರನ್ನು ಹಿಡಿದ ನಾಗೇಂದ್ರ ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಬಳಿಕ ಇಬ್ಬರನ್ನ‌ ಪೊಲೀಸರಿಗೆ ಒಪ್ಪಿಸಿ, ಆರೋಪಿಗಳ ವಿರುದ್ಧ ಐಪಿಸಿ 504 ಮತ್ತು 506 ಸೆಕ್ಷನ್ ಅಡಿ ಜೀವ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ.

Also Read  ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾ| ಘಟಕದಿಂದ ಪ್ರಬಂಧ, ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ➤ ಕನ್ನಡವನ್ನು ಉಳಿಸುವ ಕೆಲಸ ಮನೆಯಿಂದಲೇ ಆರಂಭಗೊಳ್ಳಲಿ -ಭವ್ಯಾ ಪಿ.ಆರ್

 

 

error: Content is protected !!
Scroll to Top