“ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ” ಎಂದ ಗ್ರಾಮಸ್ಥರು.!

(ನ್ಯೂಸ್ ಕಡಬ) newskadaba.com ಚಿತ್ರದುರ್ಗ,ಮೇ.15  ಕಾಂಗ್ರೆಸ್​ ಸರ್ಕಾರ 200 ಯೂನಿಟ್ ವಿದ್ಯುತ್​ಅನ್ನು ಉಚಿತವಾಗಿ ನೀಡುವ ಭರವಸೆ ಕೊಟ್ಟಿದ್ದು ಈಗಾಗಲೇ ಜನರು ಕರೆಂಟ್ ಬಿಲ್ ಕಟ್ಟಲ್ಲ ಎಂದಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ಜನರು ವಿದ್ಯುತ್ ಬಿಲ್ ಪಾವತಿಗೆ ನಿರಾಕರಿಸಿದ್ದು ಬೆಸ್ಕಾಂ ಮೀಟರ್ ರೀಡರ್​ಗೆ ಆವಾಜ್ ಕೂಡ ಹಾಕಿದ್ದಾರೆ.

ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟಲ್ಲ ಎಂದಿರುವ ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಜನರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ. ವಿದ್ಯುತ್ ಫ್ರೀ ಎಂದು ಮೊದಲೇ ಕಾಂಗ್ರೆಸ್ ಘೋಷಿಸಿದೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆಯಲ್ಲ’ ಎಂದು ಜನ ವಾದಿಸುತ್ತಿದ್ದಾರೆ.ಆದರೆ ಈ ಆದೇಶ ಬರುವವರೆಗೆ ಬಿಲ್ ಕಟ್ಟಲೇ ಬೇಕೆಂದು ಮೀಟರ್ ರೀಡರ್ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.

Also Read  ಆಟೋ ಚಾಲಕನಿಗೆ ಮಚ್ಚು ತೋರಿಸಿ 10 ಸಾವಿರ ರೂ. ದೋಚಿದ ದರೋಡೆಕೋರರು..!

 

error: Content is protected !!
Scroll to Top