ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.15. ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.


ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ಮೂರು ಗಂಟೆ ಕಾರ್ಯಾಚರಣೆ ನಡೆದಿದೆ. ಕೆಲವು ಎಮ್ಮೆಗಳು ಸುಮಾರು 25 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

error: Content is protected !!
Scroll to Top