(ನ್ಯೂಸ್ ಕಡಬ) newskadaba.com. ವಾಷಿಂಗ್ಟನ್, ಮೇ.15. ಕ್ಯಾಲಿಫೋರ್ನಿಯಾದಲ್ಲಿ ಯೂಟ್ಯೂಬ್ ನಲ್ಲಿ ಲೈಕ್ಸ್, ವೀವ್ಸ್ ಗಾಗಿ ಯುವಕನೊಬ್ಬ ಮಾಡಿದ ಸಾಹಸದಿಂದ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಯೂಟ್ಯೂಬ್ ನಲ್ಲಿ ಸಬ್ ಸ್ಕೈಬರ್ಸ್ ನ್ನು ಹೊಂದಿರುವ ಕ್ಯಾಲಿಫೋರ್ನಿಯಾದ ಲೊಂಪೊಕ್‌ನ ಟ್ರೆವರ್ ಡೇನಿಯಲ್ ಜಾಕೋಬ್ (29) ಎಂಬಾತ ಹೆಚ್ಚು ಲೈಕ್ಸ್ ಹಾಗೂ ವೀವ್ಸ್ ತನ್ನ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನ ಮಾಡಲು ಹೊರಟಿದ್ದಾರೆ.
ಇನ್ನು ತನ್ನ ವಿಮಾನವನ್ನು ಪತನ ಮಾಡಿದ್ದು, ಪ್ಯಾರಾಚೂಟ್ ನಲ್ಲಿ ಕೆಮರಾಗಳನ್ನು ಹಿಡಿದುಕೊಂಡು ಗಾಳಿಯಲ್ಲಿ ಜಾಕೋಬ್ ಹಾರಿದ್ದಾನೆ. ವಿಮಾನ ಒಣ ಪ್ರದೇಶದಲ್ಲಿ ಬಿದ್ದು ಪತನಗೊಂಡಿದೆ. ಐ ಕ್ರ್ಯಾಶ್ಡ್ ಮೈ ಏರ್‌ಪ್ಲೇನ್’ ಎಂಬ ಶೀರ್ಷಿಕೆಯಡಿಯಲ್ಲಿ ಅಪಘಾತದ ವೀಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದ್ದು, ವೈರಲ್ ವಿಡಿಯೋದಿಂದ ಆತ ಹಣವನ್ನು ಪಡೆದುಕೊಂಡಿದ್ದಾನೆ.