ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಗಮನಿಸಿ.!➤ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.15 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ. 15 ರ ಇಂದು ಕೊನೆಯ ದಿನವಾಗಿದೆ.ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮೇ.15 ರವರೆಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಛಾಯಾಪ್ರತಿಯನ್ನು ಪಡೆಯಬೇಕು.

ನಂತರವಷ್ಟೇ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ ಉಚಿತವಾಗಿರುತ್ತದೆ. ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 370 ರೂ. 2 ವಿಷಯಕ್ಕೆ 461 ರೂ. ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂ.ಗಳನ್ನು ನಿಗದಿಮಾಡಲಾಗಿದೆ.ಮರುಎಣಿಕೆಗೆ / ಮರು ಮೌಲ್ಯಮಾಪನಕ್ಕೆ ಮೇ 15ರಿಂದ ರಿಂದ ಮೇ 21 ರವರೆಗೆ ಅವಕಾಶ ನೀಡಲಾಗಿದೆ. ಇನ್ನಷ್ಟು ಅಂಕ ಬರಬೇಕಿತ್ತು ಎನ್ನುವವರು ಮರುಮೌಲ್ಯಮಾಪನ/ ಮರುಎಣಿಕೆಗೆ ಹಾಕಬಹುದು.

Also Read  ಗೋಕರ್ಣ: ಮೀನುಗಾರಿಕಾ ದೋಣಿ ಮುಳುಗಡೆ ➤ 14 ಮಂದಿ ಮೀನುಗಾರರ ರಕ್ಷಣೆ

 

 

error: Content is protected !!
Scroll to Top