ಮೊದಲ ಸಚಿವ ಸಂಪುಟದಲ್ಲಿ 5 ಭರವಸೆ ಈಡೇರಿಸ್ತೇವೆ  ➤ ರಾಹುಲ್ ಗಾಂಧಿ ಮಹತ್ವದ ಘೋಷಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ. 13. ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ನ ದೊಡ್ಡ ಗೆಲುವಿನ ಬಗ್ಗೆ ಹೇಳಿಕೆ ನೀಡಿದ ಪಕ್ಷದ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಜನತೆಗೆ, ಕಾರ್ಯಕರ್ತರಿಗೆ, ನಾಯಕರಿಗೆ ಹಾಗೂ ಕರ್ನಾಟಕದಲ್ಲಿ ದುಡಿದ ಎಲ್ಲ ನಾಯಕರನ್ನ ಅಭಿನಂದಿಸುತ್ತೇನೆ ಎಂದು ಹೇಳಿದರು.

ಗೆಲುವಿನ ಕುರಿತು ಮಾತು ಮುಂದುವರೆಸಿದ ರಾಹುಲ್, ‘ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಬಡವರ ಜೊತೆಗಿದೆ. ಈ ದೇಶವು ಪ್ರೀತಿಯನ್ನ ಇಷ್ಟಪಡುತ್ತದೆ ಎಂದು ಕರ್ನಾಟಕ ಹೇಳಿದೆ. ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಮುಚ್ಚಿದೆ, ಪ್ರೀತಿಯ ಅಂಗಡಿಗಳು ತೆರೆದಿವೆ. ಮೊದಲ ಸಚಿವ ಸಂಪುಟದಲ್ಲಿ ಮೊದಲ ದಿನವೇ 5 ಭರವಸೆಗಳನ್ನ ಈಡೇರಿಸುತ್ತೇವೆ’ ಎಂದರು.

Also Read  ಬೆಳ್ತಂಗಡಿ: ಎಂಟು ತಿಂಗಳ ಹೆಣ್ಣು ಮಗು ನೀರಿಗೆ ಬಿದ್ದು ಮೃತ್ಯು

 

error: Content is protected !!
Scroll to Top