(ನ್ಯೂಸ್ ಕಡಬ)Newskadaba.com ಮಂಗಳೂರು, ಮೇ.13. ಕದ್ರಿ ದೇವಸ್ಥಾನದ ಅಂಗಣಕ್ಕೆ ದ್ವಿಚಕ್ರ ವಾಹನದಲ್ಲಿ ಮೂವರು ಮುಸ್ಲಿಂ ಯುವಕರು ನುಗ್ಗಿ ಅನುಮಾನಸ್ಪದವಾಗಿ ವರ್ತಿಸಿದ ಘಟನೆ ಕುರಿತಂತೆ ಇದೀಗ ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಭದ್ರತಾ ಸಿಬ್ಬಂದಿ ಇರುವಾಗಲೇ ದೇವಸ್ಥಾನದ ಗೇಟ್ ಅಕ್ರಮ ಪ್ರವೇಶಿಸಿ ಪವಿತ್ರವಾದ ದೇವಸ್ಥಾನದ ಅಂಗಣದಲ್ಲಿ ಪಾದರಕ್ಷೆ ಸಹಿತ ದ್ವಿಚಕ್ರ ವಾಹನದಲ್ಲಿ ಸುತ್ತು ಬಂದು ಅಪವಿತ್ರಗೊಳಿಸುವ ಸಂಚು ನಡೆಸಿದ್ದು, ಈ ಹಿಂದೆ ಶಾಕೀರ್ ಅನ್ನುವಂತಹ ಭಯೋತ್ಪಾದಕ ಕುಕ್ಕರ್ ಬಾಂಬ್ ಮೂಲಕ ದೇವಸ್ಥಾನ ಗುರಿಯಾಗಿಟ್ಟುಕೊಂಡಿದ್ದು, ಈ ಯುವಕರು ಅಂತಹ ಭಯೋತ್ಪಾದಕ ಕೃತ್ಯ ಅಥವಾ ದೇವಸ್ಥಾನಕ್ಕೆ ಅಪವಿತ್ರ ನಡೆಸುವ ದುಷ್ಕೃತ್ಯಕ್ಕೆ ಸಂಚು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕಾಂಗ್ರೆಸ್ ಬಹುಮತ ಸಮೀಕ್ಷೆ ಹಿನ್ನೆಲೆಯಲ್ಲಿ ಜಿಹಾದಿಗಳು ಇಂತಹ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಸಂಶಯ ವ್ಯಕ್ತವಾಗಿದೆ