ಬಹುಮತದ ಸೂಚನೆ ಲಭಿಸುತ್ತಿದ್ದಂತೆಯೇ ಭಾವಿ ಶಾಸಕರ ವಾಸ್ತವ್ಯಕ್ಕೆ ಹೋಟೆಲ್ ಬುಕ್ ಮಾಡಿದ ‘ಕಾಂಗ್ರೆಸ್’..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ. 13. ಮೇ. 10ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕಾ ಕಾರ್ಯವು ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ನೂರಕ್ಕೂ ಅಧಿಕ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ತಮ್ಮ ಪಕ್ಷಕ್ಕೆ ಬಹುಮತ ಸಿಗಬಹುದೆಂಬ ವಿಶ್ವಾಸದಲ್ಲಿರೋ ಕಾಂಗ್ರೆಸ್ ನಾಯಕರು, ಸರ್ಕಾರ ರಚನೆಗೆ ಈಗಾಗಲೇ ತಯಾರಿ ನಡೆಸಿದ್ದಾರೆ.

ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ದಾಟಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರಲ್ಲಿದ್ದು, ಸ್ವಲ್ಪ ಅತ್ತ ಇತ್ತ ಕಡೆಯಾದರೂ ತಮ್ಮ ಪಕ್ಷದ ಶಾಸಕರುಗಳು ‘ಆಪರೇಷನ್ ಕಮಲ’ ಕ್ಕೆ ಒಳಗಾಗಬಾರದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿರುವ ನಾಯಕರು, ಬೆಂಗಳೂರಿನ ಶಾಂಗ್ರಿಲಾ ಹಾಗೂ ಹಿಲ್ಟನ್ ಹೋಟೆಲ್ ಗಳಲ್ಲಿ ರೂಂ ಬುಕ್ ಮಾಡಿದ್ದು, ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಭಾವಿ ಶಾಸಕರುಗಳನ್ನು ಕರೆತಂದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರ ರಚನೆಯವರೆಗೂ ಇವರುಗಳು ಹೋಟೆಲ್ ನಲ್ಲಿಯೇ ತಂಗಲಿದ್ದಾರೆ ಎಂದು ಹೇಳಲಾಗಿದೆ.

Also Read  ಆರೋಗ್ಯದಲ್ಲಿ ಏರುಪೇರು: ಗಾಳಿ ಸುದ್ದಿಗಳಿಗೆ ಕಿವಿಕೊಡದಂತೆ ಸಿದ್ದರಾಮಯ್ಯ ಟ್ವೀಟ್

error: Content is protected !!
Scroll to Top