ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ 2 ದಿನ ಮದ್ಯದಂಗಡಿಗಳು ಬಂದ್ ➤ ಸರ್ಕಾರಕ್ಕೆ 150 ಕೋಟಿ ರೂ. ನಷ್ಟ 

(ನ್ಯೂಸ್ ಕಡಬ)Newskadaba.com ಬೆಂಗಳೂರು, ಮೇ.13. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡು ದಿನ ಮದ್ಯದಂಗಡಿಗಳು ಬಾಗಿಲು ಹಾಕಿದ್ದಕ್ಕೆ ಸರ್ಕಾರಕ್ಕೆ ಅಂದಾಜು 150 ಕೋಟಿ ರೂ. ನಷ್ಟವಾಗಿದೆ.

ಅಬಕಾರಿ ಇಲಾಖೆಗೆ ಮದ್ಯಮಾರಾಟದಿಂದ ಪ್ರತಿದಿನ 60-70 ಕೋಟಿ ರೂ. ಆದಾಯ ಬರುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ತುಸು ಹೆಚ್ಚು ಆದಾಯ ಬರುತ್ತಿತ್ತು. ಮದ್ಯದಂಗಡಿ ಬಂದ್ ಮಾಡುವಂತೆ ಚುನಾವಣಾ ಆಯೋಗ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್ ಆಗಿದ್ದವು.

ಮತ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಮೇ. 13 ರ ಬೆಳಗ್ಗೆ 6 ಗಂಟೆಯಿಂದ ಮೇ. 14ರ ಮುಂಜಾನೆ 6 ಗಂಟೆಯವರೆಗೆ ಮದ್ಯದಂಗಡಿಗಳು ಮತ್ತೆ ಬಂದ್ ಆಗಲಿವೆ.

Also Read  ಪುತ್ತೂರು :ನರಿಮೊಗರಿನಲ್ಲಿ ಫಾರ್ಮ್ ಕೋಳಿಗಳ ಕಳ್ಳತನ.!

 

error: Content is protected !!
Scroll to Top