ಪ್ರಥಮ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣ ➤ ಯು.ಟಿ ಖಾದರ್ ಗೆ ಮುನ್ನಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 13. ಮಂಗಳೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ 4,155 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬೆಳ್ತಂಗಡಿ: ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ 5,751 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ 4,787 ಮತಗಳನ್ನು ಗಳಿಸಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಬಿಜೆಪಿ 11,720 ಮತ್ತು ಕಾಂಗ್ರೆಸ್ 9865 ಮತಗಳನ್ನು ಪಡೆದಿದ್ದಾರೆ.

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ 3,996, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 2,962, ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 2,392 ಮತಗಳನ್ನು ಪಡೆದಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ 8666, ಪಕ್ಷೇತರ ಅರುಣ್ ಕುಮಾರ್ ಪುತ್ತಿಲ 6495, ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 4513 ಮತಗಳನ್ನು ಪಡೆದಿದ್ದಾರೆ.

Also Read  ಬಿಸಿಲಿನ ತಾಪ ಗರಿಷ್ಟಮಟ್ಟಕ್ಕೆ ತಲುಪಿರುವ ಹಿನ್ನಲೆ   ➤ಪ್ರತಿನಿತ್ಯ ಅರ್ಧದಿನ ರಜೆ ನೀಡಬೇಕೆಂದು ಪೌರಕಾರ್ಮಿಕರ ಒತ್ತಾಯ

ಮೂಡುಬಿದಿರೆ: ಬಿಜೆಪಿಯ ಉಮಾನಾಥ ಕೋಟ್ಯಾನ್ 5,595 ಮತ್ತು ಕಾಂಗ್ರೆಸ್‌ನ ಮಿಥುನ್ ರೈ 3,204 ಮತಗಳನ್ನು ಪಡೆದಿದ್ದಾರೆ.

ಬಂಟ್ವಾಳ: ಕಾಂಗ್ರೆಸ್‌ ಅಭ್ಯರ್ಥಿ ಬಿ.ರಮಾನಾಥ ರೈ 4482 ಮತ್ತು ಬಿಜೆಪಿಯ ರಾಜೇಶ್ ನಾಯ್ಕೆ 5390 ಮತಗಳನ್ನು ಪಡೆದಿದ್ದಾರೆ.

ಸುಳ್ಯ: ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಪ್ಪ 3,969 ಮತ್ತು ಬಿಜೆಪಿಯ ಭಾಗೀರಥಿ ಮುರುಳ್ಯ 5501 ಮತಗಳನ್ನು ಪಡೆದಿದ್ದಾರೆ.

error: Content is protected !!
Scroll to Top