ಶಿರಾಡಿ, ಅಡ್ಡಹೊಳೆಗೆ ನಕ್ಸಲರ ಆಗಮನದ ಹಿನ್ನೆಲೆ ►ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ

ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.16. ಶಿರಾಡಿ ಗ್ರಾಮದ ಮಿತ್ತಮಜಲು ಪರಿಸರದಲ್ಲಿ ನಕ್ಸಲರಿದ್ದಾರೆ ಎಂಬ ಮಾಹಿತಿಯಾಧರಿಸಿ ಮಂಗಳವಾರದಿಂದ ಕೂಂಬಿಂಗ್ ಆರಂಭಿಸಲಾಗಿದೆ.

ಕಾರ್ಕಳದಿಂದ ಆಗಮಿಸಿದ ನಕ್ಸಲ್ ನಿಗ್ರಹ ಪಡೆಯ 2 ತಂಡಗಳು ಶಿರಾಡಿ ಕಾಡಿನಲ್ಲಿ ಕೂಂಬಿಂಗ್ ಆರಂಭಿಸಿದ್ದು, ಇನ್ನೂ ಹೆಚ್ಚಿನ ತಂಡಗಳು ಸ್ಥಳಕ್ಕಾಗಮಿಸುವ ನಿರೀಕ್ಷೆ ಇದೆ. ಅಡ್ಡಹೊಳೆ ಪರಿಸರದ ಮಿತ್ತಮಜಲು ಎಂಬಲ್ಲಿ ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಮೂವರು ಅಪರಿಚಿತರು ಕಾಣಿಸಿಕೊಂಡಿದ್ದು, ನಕ್ಸಲರಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮಿತ್ತಮಜಲಿನ ಮೋಹನ್, ಲೀಲಾ ಹಾಗೂ ಸುರೇಶ್ ಎಂಬವರ ಮನೆಗೆ ಭೇಟಿ ನೀಡಿರುವ ತಂಡದಲ್ಲಿ ಮೂವರಿದ್ದು, ಸುರೇಶ್ ಎಂಬವರ ಮನೆಯಿಂದ ಅಕ್ಕಿ ಪಡೆದು ತೆರಳಿದ್ದರು. ಮನೆಯಂಗಳಕ್ಕೆ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಆಗಮಿಸಿದ್ದು, ಕಾಡಿನಲ್ಲಿ ಇನ್ನೂ ಇಬ್ಬರಿದ್ದರು ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಇದೀಗ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ.

Also Read  ಬ್ಯಾರಿಕೇಡ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಟೆಂಪೋ ➤ ನಾಲ್ವರಿಗೆ ಗಂಭೀರ ಗಾಯ

error: Content is protected !!
Scroll to Top